HDFC Scholarship 2025 – ಎಲ್ಲಾ ತರಗತಿ ವಿದ್ಯಾರ್ಥಿಗಳಿಗೆ ಸಿಗದಿದೆ 75000 ವರೆಗೆ ಸ್ಕಾಲರ್ಶಿಪ್.! ಈ ವಿದ್ಯಾರ್ಥಿವೇತನ ಕ್ಕೆ ಅರ್ಜಿ ಸಲ್ಲಿಸಿ

HDFC Scholarship 2025 : HDFC ಬ್ಯಾಂಕ್ ಪರಿವರ್ತನ್ ECSS ಸ್ಕಾಲರ್‌ಶಿಪ್ 2025-26 – 75,000 ರೂ.ವರೆಗೆ ಸಹಾಯ – ಈಗಲೇ ಅರ್ಜಿ ಸಲ್ಲಿಸಿ!

ಶಿಕ್ಷಣ ಎಲ್ಲರ ಹಕ್ಕು. ಆದರೆ ಹಣಕಾಸಿನ ಕೊರತೆಯಿಂದ ಅನೇಕ ಬಡ ಕುಟುಂಬದ ಮಕ್ಕಳು ಓದನ್ನು ಮಧ್ಯದಲ್ಲೇ ನಿಲ್ಲಿಸಬೇಕಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಬೆಂಬಲವಾಗಿ HDFC ಬ್ಯಾಂಕ್ ತನ್ನ ಪರಿವರ್ತನ್ ECSS (Educational Crisis Scholarship Support) ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸ್ಕಾಲರ್‌ಶಿಪ್ ನೀಡುತ್ತಿದೆ.

WhatsApp Group Join Now
Telegram Group Join Now       

2025-26ನೇ ಸಾಲಿನಲ್ಲಿ ಕೂಡ ಈ ಯೋಜನೆ ಆರಂಭವಾಗಿದ್ದು, 1ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಓದುತ್ತಿರುವ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಬಾರಿ ಸ್ಕಾಲರ್‌ಶಿಪ್ ಮೊತ್ತ 75,000 ರೂಪಾಯಿವರೆಗೆ ಇದ್ದು, ಹಣ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ಲೇಖನದಲ್ಲಿ ಯೋಜನೆಯ ಸಂಪೂರ್ಣ ವಿವರ, ಅರ್ಹತೆ, ಮೊತ್ತ, ದಾಖಲೆಗಳು ಮತ್ತು ಅರ್ಜಿ ವಿಧಾನವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ

HDFC Scholarship 2025
HDFC Scholarship 2025
WhatsApp Group Join Now
Telegram Group Join Now       

 

ಯೋಜನೆಯ ಮುಖ್ಯ ಉದ್ದೇಶ (HDFC Scholarship 2025).?

HDFC ಬ್ಯಾಂಕ್‌ನ ಪರಿವರ್ತನ್ ECSS ಕಾರ್ಯಕ್ರಮವು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಆದರೆ ಓದಿನಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಯವಾಗಿ ಮೀಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಕುಟುಂಬದಲ್ಲಿ ಸಾವು, ಗಂಭೀರ ಅನಾರೋಗ್ಯ, ನೈಸರ್ಗಿಕ ವಿಕ ವಿಕೋಪ ಅಥವಾ ಇತರ ಬಿಕ್ಕಟ್ಟು ಎದುರಾದವರಿಗೆ ವಿಶೇಷ ಆದ್ಯತೆ ಇದೆ.

 

ಯಾರೆಲ್ಲಾ ಅರಹರು (HDFC Scholarship 2025).?

  • 1ರಿಂದ 12ನೇ ತರಗತಿ, ITI, ಪಾಲಿಟೆಕ್ನಿಕ್, ಡಿಪ್ಲೊಮಾ
  • ಪದವಿ ಕೋರ್ಸ್‌ಗಳು (B.A., B.Sc., B.Com., BCA, BBA…)
  • ವೃತ್ತಿಪರ ಪದವಿ ಕೋರ್ಸ್‌ಗಳು (B.Tech, MBBS, B.Arch, Nursing, LLB…)
  • ಸಾಮಾನ್ಯ ಸ್ನಾತಕೋತ್ತರ್ (M.A., M.Sc., M.Com.)
  • ವೃತ್ತಿಪರ ಸ್ನಾತಕೋತ್ತರ (MBA, M.Tech, MCA…)

 

ಸ್ಕಾಲರ್‌ಶಿಪ್ ಮೊತ್ತದ ವಿವರ (HDFC Scholarship 2025).?

ವಿದ್ಯಾರ್ಥಿ ವರ್ಗ ಸ್ಕಾಲರ್‌ಶಿಪ್ ಮೊತ್ತ
1 ರಿಂದ 6ನೇ ತರಗತಿ ₹15,000
7 ರಿಂದ 12, ITI, ಪಾಲಿಟೆಕ್ನಿಕ್, ಡಿಪ್ಲೊಮಾ ₹18,000
ಸಾಮಾನ್ಯ ಪದವಿ ಕೋರ್ಸ್ (B.A., B.Sc., B.Com.) ₹30,000
ವೃತ್ತಿಪರ ಪದವಿ ಕೋರ್ಸ್ (B.Tech, MBBS, BCA…) ₹50,000
ಸಾಮಾನ್ಯ ಸ್ನಾತಕೋತ್ತರ (M.A., M.Com.) ₹35,000
ವೃತ್ತಿಪರ ಸ್ನಾತಕೋತ್ತರ (MBA, M.Tech…) ₹75,000

 

ಅರ್ಹತೆಗಳು (Eligibility Criteria).?

  • ಭಾರತೀಯ ನಾಗರಿಕರಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕಗಳು (ಡಿಪ್ಲೊಮಾ ವಿದ್ಯಾರ್ಥಿಗಳಿಗೆ 12ನೇ ತರಗತಿಯ ನಂತರ ಮಾತ್ರ).
  • ಸರ್ಕಾರಿ, ಸರ್ಕಾರಿ ಸಹಾಯಕ ಅಥವಾ ಖಾಸಗಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರಬೇಕು.
  • ಕುಟುಂಬದಲ್ಲಿ ಕಳೆದ 3 ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದವರಿಗೆ ಆದ್ಯತೆ.

 

ಅಗತ್ಯ ದಾಖಲೆಗಳು (HDFC Scholarship 2025).?

  1. ವಿದ್ಯಾರ್ಥಿಯ ಪಾಸ್‌ಪೋರ್ಟ್ ಸೈಜ್ ಫೋಟೋ
  2. 2024-25ನೇ ಸಾಲಿನ ಅಂಕಪಟ್ಟಿ
  3. ಗುರುತಿನ ಚೀಟಿ (ಆಧಾರ್ ಕಾರ್ಡ್/ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್)
  4. 2025-26ನೇ ಸಾಲಿನ ಪ್ರವೇಶ ದೃಢೀಕರಣ (ಫೀ ರಸೀದಿ/ಬೋನಫೈಡ್/ಐಡಿ ಕಾರ್ಡ್)
  5. ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್ ಅಥವಾ ರದ್ದು ಚೆಕ್
  6. ಆದಾಯ ಪ್ರಮಾಣಪತ್ರ (ತಹಶೀಲ್ದಾರ್/ಗ್ರಾಮ ಪಂಚಾಯತಿ/ಅಫಿಡವಿಟ್)
  7. ಬಿಕ್ಕಟ್ಟಿನ ದಾಖಲೆ (ಅಗತ್ಯವಿದ್ದಲ್ಲಿ – ವೈದ್ಯಕೀಯ ಬಿಲ್, ಸಾವಿನ ಪ್ರಮಾಣಪತ್ರ ಇತ್ಯಾದಿ)

 

ಅರ್ಜಿ ಸಲ್ಲಿಸುವ ವಿಧಾನ (Step by Step).?

  1. www.buddy4study.com ವೆಬ್‌ಸೈಟ್ ತೆರೆಯಿರಿ.
  2. “HDFC Bank Parivartan ECSS Programme 2025-26” ಹುಡುಕಿ.
  3. ‘Apply Now’ ಬಟನ್ ಕ್ಲಿಕ್ ಮಾಡಿ.
  4. ಮೊಬೈಲ್ ನಂಬರ್ ಅಥವಾ ಇಮೇಲ್‌ನಿಂದ ಲಾಗಿನ್ ಆಗಿ.
  5. ಆನ್‌ಲೈನ್ ಅರ್ಜಿ ಫಾರ್ಮ್ ತುಂಬಿ, ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  6. Terms & Conditions ಒಪ್ಪಿ Submit ಮಾಡಿ.

ಅರ್ಜಿ ಲಿಂಕ್:
👉 https://www.buddy4study.com/page/hdfc-bank-parivartans-ecss-programme

ಕೊನೆಯ ದಿನಾಂಕ: 31 ಡಿಸೆಂಬರ್ 2025

 

ವಿಶೇಷ ಸೂಚನೆಗಳು

  • ಅರ್ಜಿ ಸಂಪೂರ್ಣ ಆನ್‌ಲೈನ್ – ಯಾವುದೇ ಶುಲ್ಕವಿಲ್ಲ.
  • ಎಲ್ಲ ವರ್ಗ, ಎಲ್ಲ ಜಾತಿ, ಎಲ್ಲ ಧರ್ಮದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗುತ್ತದೆ.
  • ಆಯ್ಕೆಯಾದವರ ಪಟ್ಟಿ Buddy4Study ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತದೆ.

ಈ ಸ್ಕಾಲರ್‌ಶಿಪ್ ಕೇವಲ ಹಣವಲ್ಲ – ಇದು ಒಂದು ಬಡ ವಿದ್ಯಾರ್ಥಿಯ ಕನಸುಗಳಿಗೆ ರೆಕ್ಕೆ ಕೊಡುವ ಶಕ್ತಿ. ದಾಖಲೆಗಳನ್ನು ಈಗಲೇ ಸಿದ್ಧಪಡಿಸಿ, 31 ಡಿಸೆಂಬರ್ 2025ರೊಳಗೆ ಅರ್ಜಿ ಸಲ್ಲಿಸಿ.

ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ಗ್ರೂಪ್‌ಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ – ಒಬ್ಬ ಮಗುವಿನ ಭವಿಷ್ಯವಾದರೂ ಬದಲಾಯಿಸೋಣ!

ಶುಭಾಶಯಗಳು – ನಿಮ್ಮ ಓದು ಸುಗಮವಾಗಲಿ! 

PMAY Scheme – ಮನೆ ಕಟ್ಟಿಸಲು 2.67 ಲಕ್ಷದವರೆಗೆ ಸಬ್ಸಿಡಿ.! 18 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

Leave a Comment

?>