E Shram Card – ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಸಾಕು ಪ್ರತಿ ತಿಂಗಳು 3000 ಹಣ ಸಿಗುತ್ತೆ
ನಮಸ್ಕಾರ ಗೆಳೆಯರೇ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಹೊಸ ಯೋಜನೆ ಜಾರಿಗೆ ತಂದಿದೆ. ಹೌದು ಗೆಳೆಯರೆ ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ಜನರು ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ದಿನಗೂಲಿಗೆ ಕೆಲಸ ಮಾಡುವಂತಹ ಸಾಕಷ್ಟು ಜನರು ನಮ್ಮ ಭಾರತ ದೇಶದಲ್ಲಿ ಇದ್ದಾರೆ, ಅಂತವರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 3000 ಹಣ ಪಿಂಚಣಿ ರೂಪದಲ್ಲಿ ವಯಸ್ಸಾದಂತ ಸಂದರ್ಭದಲ್ಲಿ ಈ ಒಂದು ಯೋಜನೆಯ ಮೂಲಕ ನೀಡುತ್ತಿದೆ
ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯದು ಹಾಗೂ ಈ ಒಂದು ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿ
ಇ- ಶ್ರಮ್ ಕಾರ್ಡ್ ಎಂದರೆ ಏನು..?
ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಅಂದರೆ, ದಿನಗೂಲಿ ಮಾಡುವಂತಹ ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಮತ್ತು ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿರುವವರು ಹಾಗೂ ಗಾರೆ ಕೆಲಸಗಾರರು ಮತ್ತು ಗೃಹಸೇವಕರು ಹಾಗೂ ಇತರೆ ಅಸಂಘಟಿತ ವಲಯದ ಕೆಲಸಗಳಲ್ಲಿ ತೊಡಗಿಕೊಂಡಿರುವ ಜನರಿಗಾಗಿ ಇ- ಶ್ರಮ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ.

ಇ- ಶ್ರಮ್ ಕಾರ್ಡ್ ಯೋಜನೆ ಕೇಂದ್ರ ಸರ್ಕಾರ 2021 ರಲ್ಲಿ ಜಾರಿಗೆ ತರಲಾಗಿದೆ ಹಾಗೂ ಈ ಯೋಜನೆ ದಿನಗೂಲಿ ಕಾರ್ಮಿಕರಿಗೆ ಗುರುತಿನ ಚೀಟಿ ಮಾತ್ರವಲ್ಲದೆ ಒಂದು ಸಾಮಾಜಿಕ ಭದ್ರತೆಯನ್ನು ಈ ಒಂದು ಯೋಜನೆ ಕಲ್ಪಿಸಿ ಕೊಡುತ್ತದೆ.
2025ರಲ್ಲಿ ಈ ಒಂದು ಯೋಜನೆಗೆ ಸಕ್ರಿಯವಾಗಿ ಗಿಗ್ ಎಕನಾಮಿಕ್ ಕಾರ್ಮಿಕರನ್ನು ಕೂಡ ಸೇರಿಸಿಕೊಳ್ಳಲಾಗಿದೆ ಹಾಗಾಗಿ ಈ ಒಂದು ಲೇಖನ ಮೂಲಕ ಇ- ಶ್ರಮ್ ಕಾರ್ಡ್ ಯೋಜನೆಯ ಪ್ರಯೋಜನಗಳು ಹಾಗೂ ಇತರೆ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಸ್ನೇಹಿತರೆ ಈ ಶ್ರಮ ಕಾರ್ಡ್ ಯೋಜನೆಯನ್ನು ಉದ್ಯೋಗ ಸಚಿವಾಲಯದ ಮೂಲಕ ಜಾರಿಗೆ ತರಲಾಗಿದೆ ಹಾಗೂ ಈ ಒಂದು ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಹಾಗೂ ಅವರಿಗೆ ಇತರ ಸರಕಾರಿ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು.
ಈ ಕಾರ್ಡ್ ನಲ್ಲಿ 12 ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ ಹೊಂದಿರುತ್ತದೆ ಹಾಗಾಗಿ ಇದು ನಮ್ಮ ದೇಶದಾದ್ಯಂತ ಮಾನ್ಯವಾಗಿರುವ ಒಂದು ಉನಿಕ್ ಕಾರ್ಡ್ ಆಗಿದೆ ಹಾಗಾಗಿ ಕಾರ್ಮಿಕರು ಸ್ಥಳಾಂತರಗೊಂಡರೆ ಮತ್ತು ದೇಶದ ಯಾವುದೇ ಪ್ರದೇಶದಲ್ಲಿಯೂ ಕೂಡ ಈ ಒಂದು ಯೋಜನೆ ಲಾಭ ಪಡೆಯಬಹುದು
ಇ- ಶ್ರಮ್ ಕಾರ್ಡ್ ಯೋಜನೆಯ ಪ್ರಯೋಜನಗಳು ಏನು..?
ಸ್ನೇಹಿತರೆ ಕೇಂದ್ರ ಸರ್ಕಾರ ಇ- ಶ್ರಮ್ ಕಾರ್ಡ್ ಯೋಜನೆಯ ಮೂಲಕ ಹಲವಾರು ಪ್ರಯೋಜನಗಳು ನೀಡುತ್ತಿದೆ ಇದಕ್ಕೆ ಸಂಬಂಧಿಸಿದ ವಿವರ ಈಗ ತಿಳಿದುಕೊಳ್ಳೋಣ
ಪ್ರತಿ ತಿಂಗಳು 3000 ಪಿಂಚಣಿ ಸೌಲಭ್ಯ: ಹೌದು ಸ್ನೇಹಿತರೆ, ಈ ಶ್ರಮ ಕಾರ್ಡ್ ಪ್ರಮುಖ ಪ್ರಯೋಜನವೇನೆಂದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 60 ವರ್ಷ ಪೂರೈಸಿದ ನಂತರ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತಿದೆ ಮತ್ತು ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಅರ್ಜಿ ಸಲ್ಲಿಸಿ ತಿಂಗಳಿಗೆ 6000 ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಬಹುದು
ಅಪಘಾತ ವಿಮೆ: ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಮೂಲಕ ಈ ಒಂದು ಯೋಜನೆಯ ಪಾರಾನುಭವಿಗಳಿಗೆ ಮರಣ ಹೊಂದಿದರೆ ಎರಡು ಲಕ್ಷ ಹಾಗೂ ಭಾಗಶ ಅಂಗವಿಕಲತೆ ಉಂಟಾದರೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ
ಆರೋಗ್ಯ ವಿಮೆ ಸೌಲಭ್ಯ: ಈ ಶ್ರಮ ಕಾರ್ಡ್ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ವಾರ್ಷಿಕವಾಗಿ 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ
ಪ್ರತಿ ತಿಂಗಳು 3000 ಹಣ ಸಿಗುತ್ತೆ ಅಥವಾ ಇಲ್ಲಾ.! ಇದು ನಿಜಾನಾ ಸುಳ್ಳ..?
ಹೌದು ಸ್ನೇಹಿತರೆ ತುಂಬಾ ಜನರಿಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ ಅಥವಾ ಇಲ್ಲ ಎಂಬ ಮಾಹಿತಿಗಾಗಿ ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಶ್ರಮ ಪೋರ್ಟಲ್ ಅಧಿಕೃತ ವೆಬ್ಸೈಟ್ನಲ್ಲಿ ಮೆನ್ಷನ್ ಮಾಡಿದೆ. ಅದರ ಒಂದು ಫೋಟೋ ನಾವು ಕೆಳಗಡೆ ನೀಡಿದ್ದೇವೆ

ವಿಶೇಷವಾಗಿ ಗಮನಿಸಬೇಕಾದ ಅಂಶವೇನೆಂದರೆ, ಈ ಒಂದು ಯೋಜನೆಯಿಂದ ಪ್ರತಿ ತಿಂಗಳು 3000 ಹಣ ಪಡೆಯಬೇಕು ಅಂದರೆ, ಕಡ್ಡಾಯವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ನಂತರ ನಿಮಗೆ 60 ವರ್ಷ ಪೂರೈಸಿದ ನಂತರ ಮಾಸಿಕ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು 3000 ಹಣ ಸಿಗುತ್ತೆ. ಆದರಿಂದ ಅರ್ಜಿ ಸಲ್ಲಿಸಿದ ತಕ್ಷಣ ನಿಮಗೆ ಪ್ರತಿ ತಿಂಗಳು 3,000 ಹಣ ಸಿಗುವುದಿಲ್ಲ ಬದಲಾಗಿ ನಿಮಗೆ ವಯಸ್ಸಾದಂತ ಸಂದರ್ಭದಲ್ಲಿ ಅಥವಾ ಅರವತ್ತು ವರ್ಷ ಪೂರೈಸಿದ ನಂತರ ಪಿಂಚಣಿ ರೂಪದಲ್ಲಿ ಮಾತ್ರ ಹಣ ಸಿಗುತ್ತದೆ
ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು
- ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ವಹಿಸು ಕನಿಷ್ಠ 16 ವರ್ಷದಿಂದ 59 ವರ್ಷದ ನಡೆಯುವರು ಅರ್ಜಿ ಸಲ್ಲಿಸಬಹುದು
- ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು (ದಿನಗೂಲಿ ಕಾರ್ಮಿಕರು, ಗಾರೆ ಕೆಲಸ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಗಿಗ್ ವರ್ಕರ್ಸ್ ಇತ್ಯಾದಿ)
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು EPFO/ESIC ಸದಸ್ಯರು ಆಗಿರಬಾರದು
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಆದಾಯ ತೆರಿಗೆ ಪಾವತಿ ಮಾಡುವವರಿಗೆ ಅರ್ಹತೆ ಇರುವುದಿಲ್ಲ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರ
- ಫೋಟೋ ಮತ್ತು ಸಹಿ
- ಇತರೆ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ..?
- ಅರ್ಜಿದಾರರು ಮೊದಲು https://eshram.gov.in/ ಜಾಲತಾಣಕ್ಕೆ ಭೇಟಿ ನೀಡಿ
- ನಂತರ ರಿಜಿಸ್ಟರ್ ಆನ್ ಈಶ್ರಮ ಕಾರ್ಡ್ ಎಂಬುವುದರ ಮೇಲೆ ಕ್ಲಿಕ್ ಮಾಡಿ
- ನಂತರ ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದರ ಮೇಲೆ ಎಂಟರ್ ಮಾಡಿ
- ನಂತರ ಓಟಿಪಿ ದಾಖಲಿಸಿದ ನಂತರ ನಿಮ್ಮ ಹೆಸರು ಹಾಗೂ ವಯಸ್ಸು ಮತ್ತು ವಿಳಾಸ ಹಾಗೂ ಉದ್ಯೋಗದ ವಿವರ ಮತ್ತು ಬ್ಯಾಂಕ್ ಖಾತೆ ವಿವರ ಎಲ್ಲಾ ವಿವರವನ್ನು ಭರ್ತಿ ಮಾಡಿ
- ನಂತರ ಎಲ್ಲಾ ಮಾಹಿತಿಗಳು ಸರಿಯಾಗಿ ಇದೆ ಎಂದು ಒಂದು ಸಲ ಚೆಕ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಯುಎನ್ಎ ಜನರೇಟ್ ಆಗುತ್ತದೆ. ಆನಂತರ ಈ ಶ್ರಮ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೇಲೆ ನೀಡಿದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಅಥವಾ ಇತರೆ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಹೆಚ್ಚಿನ ಮಾಹಿತಿಗಾಗಿ:
- ದೂರವಾಣಿ ಸಂಖ್ಯೆ: 14434
- Gamil: helpdesk.eshram@gov.in
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ಆಸಕ್ತಿ ಇದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
Bele Parihara – ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ, ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ