Bele Parihara – ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ, ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ
ನಮಸ್ಕಾರ ಗೆಳೆಯರೇ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಈ ವರ್ಷ ಅಂದರೆ 2025 ಮತ್ತು 26 ನೇ ಸಾಲಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆಯಿಂದ ನಮ್ಮ ರಾಜ್ಯದ ಹಲವು ಜಿಲ್ಲೆಯ ರೈತರ ಬೆಳೆ ಹಾನಿ ಉಂಟಾಗಿದೆ.
ಇದರಿಂದ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಬೆಳೆ ಹಾನಿಗೆ ನಷ್ಟ ಪರಿಹಾರವಾಗಿ ಬೆಳೆ ಪರಿಹಾರ ಹಣ ನೀಡಲು ನಿರ್ಧಾರ ಮಾಡಿದೆ.
ಇದೀಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ರೈತರ ಖಾತೆಗೆ ಬೆಳೆ ಆನೆ ಪರಿಹಾರ ಹಣ ಈಗಾಗಲೇ ಬಿಡುಗಡೆ ಪ್ರಾರಂಭವಾಗಿದೆ ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಅಪ್ಡೇಟ್ ಬಂದಿದ್ದು ರೈತರು ಕಡ್ಡಾಯವಾಗಿ ಬೆಳೆ ಪರಿಹಾರ ಹಣ ಪಡೆಯಲು ಕೆಲವೊಂದು ರೂಲ್ಸ್ ಅಥವಾ ನಿಯಮಗಳನ್ನು ಪಾಲಿಸಬೇಕು ಇದಕ್ಕೆ ಸಂಬಂಧಿಸಿದೆ ವಿವರವನ್ನು ತಿಳಿಯೋಣ..
ಬೆಳೆ ಪರಿಹಾರ (Bele Parihara).?
ಹೌದು ಗೆಳೆಯರೇ ಈ ವರ್ಷ ನಮ್ಮ ಕರ್ನಾಟಕದಲ್ಲಿ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಯಾದ ಮಳೆಯಿಂದ ನಮ್ಮ ವಿವಿಧ ಭಾಗಗಳಲ್ಲಿ ಮತ್ತು ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ರೈತರು ಬೆಳೆದ ಬೆಳೆ ಹಾನಿ ಉಂಟಾಗಿದೆ.

ಇದರಿಂದ ರೈತರಿಗೆ ಆರ್ಥಿಕವಾಗಿ ತುಂಬಾ ನಷ್ಟ ಉಂಟಾಗಿದೆ ಎಂದು ಹೇಳಬಹುದು, ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಭರವಸೆ ನೀಡುವ ಉದ್ದೇಶದಿಂದ ಹಾಗೂ ಅಲ್ಪ ಪ್ರಮಾಣದಲ್ಲಿ ಆದರೂ ಕೂಡ ಆರ್ಥಿಕ ನಷ್ಟ ಕಡಿಮೆ ಮಾಡುವ ಉದ್ದೇಶದಿಂದ ಇದೀಗ ಬೆಳೆ ಪರಿಹಾರ ಘೋಷಣೆ ಮಾಡಿವೆ
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ NDRF ಮಾರ್ಗಸೂಚಿಯ ಪ್ರಕಾರ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲು ಕರ್ನಾಟಕ ರಾಜ್ಯಕ್ಕೆ ಇದೀಗ ಸುಮಾರು 391 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿಯಾಗಿ ಸುಮಾರು 8500 ಹಣವನ್ನು ಪರಿಹಾರ ಮೊತ್ತ ನೀಡುವುದಾಗಿ ಘೋಷಣೆ ಮಾಡಿದೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು
ರೈತರಿಗೆ ಎಷ್ಟು ಬೆಳೆ ಪರಿಹಾರ ಹಣ ಸಿಗುತ್ತದೆ (Bele Parihara).?
ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ರೈತರಿಗೆ ಬೆಳೆ ಹಾನಿ ಆದ ಆಧಾರದ ಮೇಲೆ ರೈತರಿಗೆ ಬೆಳೆ ಪರಿಹಾರ ಹಣ ನೀಡಲಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ನಾವು ಕೆಳಗಡೆ ಮಾಹಿತಿ ತಿಳಿಸಿದ್ದೇವೆ
ಮಳೆ ಅವಲಂಬಿತ ಬೆಳೆಗಳಿಗೆ: ರೈತರು ಬೆಳೆದ ಬೆಳೆಗಳು ಮಳೆ ಅವಲಂಬಿತ ಬೆಳೆಗಳಾಗಿದ್ದರೆ ಅಂತಹ ಬೆಳೆಗಳಿಗೆ ಪ್ರತಿ ಹೆಕ್ಟೇರ್ (2.5 ಎಕರೆ) ಪ್ರದೇಶದಲ್ಲಿ ಬೆಳೆ ಹಾನಿ ಉಂಟಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸರಿಸುಮಾರು ₹17,000 ವರೆಗೆ ಬೆಳೆ ಪರಿಹಾರ ಹಣ ಪಡೆದುಕೊಳ್ಳಬಹುದು
ನೀರಾವರಿ ಬೆಳೆಗಳಿಗೆ: ರೈತರು ಬೆಳೆದ ಬೆಳೆಗಳು ನೀರಾವರಿ ಅವಲಂಬಿತ ಬೆಳೆಗಳಾಗಿದ್ದರೆ ಅಂತಹ ಬೆಳೆಗಳಿಗೆ ಪ್ರತಿ ಹೆಕ್ಟೇರ್ (2.5 ಎಕರೆ) ಪ್ರದೇಶದಲ್ಲಿ ಬೆಳೆ ಹಾನಿ ಉಂಟಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸರಿಸುಮಾರು ₹25,500 ವರೆಗೆ ಬೆಳೆ ಪರಿಹಾರ ಹಣ ಪಡೆದುಕೊಳ್ಳಬಹುದು
ದೀರ್ಘಕಾಲಿಕ ಬೆಳೆಗಳು: ರೈತರು ಬೆಳೆದ ಬೆಳೆಗಳು ದೀರ್ಘಕಾಲಿಕ ಬೆಳೆಗಳಾಗಿದ್ದರೆ ಅಂತಹ ಬೆಳೆಗಳಿಗೆ ಪ್ರತಿ ಹೆಕ್ಟೇರ್ (2.5 ಎಕರೆ) ಪ್ರದೇಶದಲ್ಲಿ ಬೆಳೆ ಹಾನಿ ಉಂಟಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸರಿಸುಮಾರು ₹31,000 ವರೆಗೆ ಬೆಳೆ ಪರಿಹಾರ ಹಣ ಪಡೆದುಕೊಳ್ಳಬಹುದು
ಬೆಳೆ ಪರಿಹಾರ ಹಣ ಪಡೆಯಲು (Bele Parihara) ರೈತರು ಈ ಕೆಲಸ ಮಾಡಿ..?
ಸ್ನೇಹಿತರೆ ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಅಥವಾ ರೂಲ್ಸ್ ಪಾಲಿಸಬೇಕು ಇದಕ್ಕೆ ಸಂಬಂಧಿಸಿದೆ ಮಾಹಿತಿ ಈಗ ತಿಳಿಯೋಣ
FRUITS (ಫ್ರೂಟ್ಸ್) ತಂತ್ರಾಂಶದಲ್ಲಿ ನೋಂದಣಿ: ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ FRUITS (ಫ್ರೂಟ್ಸ್) ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರಬೇಕು ಹಾಗೂ FID (ಫ್ರೂಟ್ಸ್ ಐಡಿ) ಕ್ರಿಯೇಟ್ ಮಾಡಿರಬೇಕು ಅಂದರೆ ಮಾತ್ರ ರೈತರಿಗೆ ಪರಿಹಾರ ಹಣ ಸಿಗುತ್ತದೆ
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು: ರೈತರು ಬೆಳೆ ಹಾನಿ ಪರಿಹಾರದ ಹಣ ಪಡೆಯಲು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಹಾಗೂ e-kyc ಮಾಡಿಸಿರಬೇಕು ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ
ಜಮೀನು ದಾಖಲಾತಿಗಳು: ರೈತರು ಬೆಳೆ ಹಾನಿ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ತಮ್ಮ ಜಮೀನು ದಾಖಲಾತಿಗಳ ಪ್ರಮಾಣ ಪತ್ರ ಸರಿಯಾಗಿ ಇಟ್ಟುಕೊಂಡಿರಬೇಕು ಅಂದರೆ ಜಮೀನು ಪತ್ರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಜಮೀನು ದಾಖಲಾತಿಗಳಲ್ಲಿ ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಮತ್ತು ಇತರೆ ದಾಖಲಾತಿಗಳಲ್ಲಿ ಕೂಡ ಎಲ್ಲಾ ಹೆಸರು ಒಂದೇ ರೀತಿ ಇರಬೇಕು
ವಿಶೇಷ ಸೂಚನೆ: ಸ್ನೇಹಿತರೆ ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹಾಗೂ ನಿಮಗೆ ಹಣ ಜಮಾ ಆಗಿಲ್ಲ ಅಂದರೆ ನೀವು ಕೂಡಲೇ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ನಿಮ್ಮ ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಿಗ ಅಧಿಕಾರಿಗಳನ್ನು ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು
ಬೆಳೆ ಪರಿಹಾರ ಹಣ (Bele Parihara) ಯಾವಾಗ ಜಮಾ ಆಗುತ್ತದೆ..?
ಸ್ನೇಹಿತರೆ ಇದೀಗ ಕೆಲ ಜಿಲ್ಲೆಗಳಲ್ಲಿ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಮಾಡಲು ಪ್ರಾರಂಭ ಮಾಡಲಾಗಿದೆ, ಹೌದು ಸ್ನೇಹಿತರೆ, ಬೀದರ್ ಮತ್ತು ಬೆಳಗಾವಿ ಹಾಗೂ ಗದಗ್ ಜಿಲ್ಲೆಯ ರೈತರ ಖಾತೆಗೆ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದೆ ಹಾಗಾಗಿ ರೈತರು ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ಚೆಕ್ ಮಾಡಿ ಕೊಳ್ಳಿ. ಒಂದು ವೇಳೆ ನಿಮಗೆ ಇನ್ನೂ ಹಣ ಜಮಾ ಆಗಿಲ್ಲ ಅಂದರೆ ಹತ್ತು ದಿನಗಳ ಒಳಗಡೆ ಹಣ ಜಮಾ ಆಗುತ್ತೆ ಅಲ್ಲಿವರೆಗೂ ಕಾಯಿರಿ
ನಮ್ಮ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಇರುವ ರೈತರ ಖಾತೆಯು ಕೂಡ ಪರಿಹಾರ ಹಣ ಇನ್ನೂ 15 ದಿನಗಳ ಒಳಗಡೆ ಪ್ರತಿಯೊಬ್ಬರ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ರೈತರು ಹಣ ಬರುವವರೆಗೂ ತಾಳ್ಮೆಯಿಂದ ಕಾಯಬೇಕು.
ಒಂದು ವೇಳೆ ಬೆಳೆ ಪರಿಹಾರ ಹಣ ಜಮಾ ಆಗದೆ ಇದ್ದರೆ ಮತ್ತು ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ಗ್ರಾಮ ಲೆಕ್ಕಿಗ ಅಧಿಕಾರಿ ಅಥವಾ ಕುಲಕರಣಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ನೀವು ಒಂದು ಕೆಲಸ ಮಾಡಬೇಕು ಅದು ಏನು ಅಂದರೆ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
New Jio Recharge Plan: ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ