Bele Parihara Hana: ಬೆಳೆ ಪರಿಹಾರ ಹಣ ಈ ದಿನ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡುವುದು ಕಡ್ಡಾಯ
ನಮಸ್ಕಾರ ಗೆಳೆಯರೇ ಈ ಒಂದು ಲೇಖನೆಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ರೈತರ ಖಾತೆಗೆ ಬೆಳೆ ಪರಿಹಾರ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ರೈತರು ಬೆಳೆ ಪರಿಹಾರದ ಹಣ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನಯ ಮೂಲಕ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ನೀವು ಆದಷ್ಟು ಈ ಒಂದು ಲೇಖನೆಯನ್ನು ನಿಮ್ಮ ಸ್ನೇಹಿತರು ಹಾಗೂ ರೈತ ವರ್ಗದ ಜನರಿಗೆ ಶೇರ್ ಮಾಡಲು ಮಾಡಿ
ಏಕೆಂದರೆ ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆಯಿಂದ ರೈತರು ಬೆಳೆದಂತಹ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳು ಮತ್ತು ಇತರೆ ಬೆಳೆಗಳು ಹಾನಿ ಉಂಟಾಗಿದೆ ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಇದೀಗ ರೈತರಿಗೆ ಹಾನಿಗೊಳಗಾದ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಅಥವಾ ಬೆಳೆ ಪರಿಹಾರ ರೈತರ ಖಾತೆಗೆ ಬಿಡುಗಡೆ ಮಾಡಲು ಬೇಗ ಸಿದ್ಧತೆ ಮಾಡಿಕೊಳ್ಳಲಾಗಿದೆ ಹಾಗಾಗಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳೋಣ
ರೈತರ ಬೆಳೆದ ಬೆಳೆಗಳು ಸಂಪೂರ್ಣ ನಾಶ (Bele Parihara Hana).?
ಹೌದು ಸ್ನೇಹಿತರೆ ಈ ವರ್ಷ ಅಂದರೆ 2025 ಮತ್ತು 26 ನೇ ಸಾಲಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಯಾದ ಮಳೆಯಿಂದ ನಮ್ಮ ಕರ್ನಾಟಕದ ವಿವಿಧ ಭಾಗಗಳಲ್ಲಿ ರೈತರು ಬೆಳೆದ ಬೆಳೆಗಳು ಭಾಗಶಃ ಹಾನಿ ಉಂಟಾಗಿದೆ ಇದರಿಂದ ರೈತರು ಈ ವರ್ಷ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹಾಗಾಗಿ ರೈತರು ಸರಕಾರದಿಂದ ಬೆಳೆ ಹಾನಿಗೆ ಪರಿಹಾರ ನೀಡಲು ಸಾಕಷ್ಟು ಒತ್ತಾಯ ಮಾಡುತ್ತಿದ್ದಾರೆ ಹಾಗೂ ಹಲವು ಸಂಘಟನೆಗಳು ಈ ಪರಿಹಾರ ಹಣಕ್ಕಾಗಿ ಇನ್ನೂ ಕೂಡ ಹೋರಾಟ ಮಾಡುತ್ತಿದ್ದಾರೆ

ಇದೀಗ ರಾಜ್ಯ ಸರ್ಕಾರ ನಮ್ಮ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾನಿಗೊಳಗಾದ ಬೆಳೆಗಳಿಗೆ ನಷ್ಟಕ್ಕೆ ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ಹೆಚ್ಚುವರಿಯಾಗಿ ₹8,500 ಹಣ ನೀಡುವುದಾಗಿ ಘೋಷಣೆ ಮಾಡಿದೆ ಹಾಗಾಗಿ ಈ ಒಂದು ಲೇಖನಿಯ ಮೂಲಕ ಬೆಳೆ ಪರಿಹಾರ ಹಣ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಎಷ್ಟು ಹಣ ಬರುತ್ತೆ ಎಂಬ ಮಾಹಿತಿಯನ್ನು ತಿಳಿಯೋಣ
ಬೆಳೆ ಪರಿಹಾರ ಹಣ (Bele Parihara Hana) ಯಾವಾಗ ಬಿಡುಗಡೆಯಾಗುತ್ತದೆ..?
ಸ್ನೇಹಿತರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜೊತೆಗೂಡಿ ರೈತರ ಬೆಳೆಗಳಿಗೆ ಪರಿಹಾರ ನೀಡುತ್ತಿದೆ, ಇದೀಗ ಕೇಂದ್ರ ಸರ್ಕಾರ ನಮ್ಮ ಕರ್ನಾಟಕದ ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ನೀಡಲು ಸುಮಾರು 391 ಕೋಟಿ ರೂಪಾಯಿ ಹಣವನ್ನು ಈಗಾಗಲೇ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ರಾಜ್ಯ ಸರ್ಕಾರವೂ ಕೂಡ ರಾಜ್ಯದ ರೈತರ ಖಾತೆಗೆ ಈಗಾಗಲೇ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವ ಈಶ್ವರ್ ಕಂಡ್ರೆ ಮತ್ತು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಮುಂತಾದ ಕರ್ನಾಟಕದ ಪ್ರಮುಖ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ಹಂಚಿಕೊಂಡಿರುವ ಪ್ರಕಾರ ರಾಜ್ಯದ ರೈತರ ಖಾತೆಗೆ ಅಕ್ಟೋಬರ್ 30ನೇ ತಾರೀಖಿನಿಂದ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಹಾಗೂ ಈಗಾಗಲೇ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವ ರೈತರ ಅರ್ಹ ಪಟ್ಟಿಗಳನ್ನು ಅಧಿಕೃತ https://parihara.karnataka.gov.in/ ಜಾಲತಾಣದಲ್ಲಿ ಪ್ರಕಟಣೆ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ರಾಜ್ಯದ ರೈತರ ಖಾತೆಗೆ ನವೆಂಬರ್ 15ನೇ ತಾರೀಖಿನ ಒಳಗಡೆ ಪ್ರತಿಯೊಬ್ಬ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ರೈತರು ಬೆಳೆ ಪರಿಹಾರ ಹಣ ಬರುವವರೆಗೂ ತಾಳ್ಮೆಯಿಂದ ಕಾಯಬೇಕು
ಬೆಳೆ ಪರಿಹಾರ ಹಣ ಎಷ್ಟು! ರೈತರ ಖಾತೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ..?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲು ಕೆಲವೊಂದು ಮಾರ್ಗಸೂಚಿ ಅನುಸರಿಸುತ್ತವೆ ಅದೇ ರೀತಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ NDRF ಮಾರ್ಗಸೂಚಿ ಅಡಿಯಲ್ಲಿ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಇದರ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ₹8,500 ಹಣ ನೀಡುವುದಾಗಿ ಘೋಷಣೆ ಮಾಡಿದೆ ಹಾಗಾಗಿ ಒಟ್ಟು ರೈತರ ಖಾತೆಗೆ ಎಷ್ಟು ಹಣ ಬರುತ್ತೆ ಎಂಬ ಮಾಹಿತಿ ಕೆಳಗಡೆ ತಿಳಿಸಲಾಗಿದೆ
ಮಳೆ ಆಶ್ರಿತ ಬೆಳೆಗಳಿಗೆ: ಪ್ರತಿ ಹೆಕ್ಟೇರ್ (2.5 ಎಕರೆ) ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಬೆಳೆ ಪರಿಹಾರ ಹಣ ಒಟ್ಟು ₹17,000/- ವರೆಗೆ ಪರಿಹಾರ ನೀಡಲಾಗುತ್ತದೆ
ನೀರಾವರಿ ಬೆಳೆಗಳಿಗೆ: ಪ್ರತಿ ಹೆಕ್ಟೇರ್ (2.5 ಎಕರೆ) ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಬೆಳೆ ಪರಿಹಾರ ಹಣ ಒಟ್ಟು ₹25,500/- ವರೆಗೆ ಪರಿಹಾರ ನೀಡಲಾಗುತ್ತದೆ
ದೀರ್ಘಕಾಲಿಕ ಬೆಳೆಗಳಿಗೆ: ಪ್ರತಿ ಹೆಕ್ಟೇರ್ (2.5 ಎಕರೆ) ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಬೆಳೆ ಪರಿಹಾರ ಹಣ ಒಟ್ಟು ₹31,000/- ವರೆಗೆ ಪರಿಹಾರ ನೀಡಲಾಗುತ್ತದೆ
ಬೆಳೆ ಪರಿಹಾರ ಹಣ (Bele Parihara Hana) ಪಡೆಯಲು ರೈತರು ಈ ಕೆಲಸ ಮಾಡಿ.?
ರೈತರ ಬೆಳೆ ಪರಿಹಾರ ಹಣ ಪಡೆಯಲು ಕೆಳಗಡೆ ನೀಡಿದ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಅಂದರೆ ಮಾತ್ರ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗುತ್ತದೆ ಇಲ್ಲವಾದರೆ ಹಣ ಜಮಾ ಆಗುವುದಿಲ್ಲ
FRUITS (ಫ್ರೂಟ್ಸ್) ನೋಂದಣಿ: ರೈತರು ಪರಿಹರ ಹಣ ಪಡೆಯಲು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಮಂದಾನಿ ಮಾಡಿಕೊಂಡಿರಬೇಕು ಹಾಗೂ ತಮ್ಮ ಜಮೀನಿಗೆ ಕಡ್ಡಾಯವಾಗಿ ರೈತರು FID ಕ್ರಿಯೇಟ್ ಮಾಡಿಸಿ ಅಂದರೆ ಮಾತ್ರ ಬೆಳೆ ಹಾನಿ ಪರಿಹಾರದ ಹಣ ರೈತರ ಖಾತೆಗೆ ಸಿಗುತ್ತದೆ
ಬ್ಯಾಂಕ್ ಖಾತೆ ಮಾಹಿತಿ ಸರಿಪಡಿಸಿ: ರೈತರು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಹಾಗೂ e-kyc ಪ್ರಕ್ರಿಯ ಪೂರ್ಣಗೊಳಿಸಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವ NPCI ಮ್ಯಾಪಿಂಗ್ ಮಾಡಿಸಿ
ಜಮೀನು ದಾಖಲಾತಿಗಳು ಸರಿಪಡಿಸಿ: ರೈತರು ಪರಿಹಾರದ ಹಣ ಪಡೆಯಲು ಕಡ್ಡಾಯವಾಗಿ ಜಮೀನು ದಾಖಲಾತಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಈಕೆ ವೈ ಸಿ ಮತ್ತು ಜಮೀನು ದಾಖಲಾತಿಗಳಲ್ಲಿ ಹಾಗೂ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ನಲ್ಲಿ ಎಲ್ಲಾ ಹೆಸರು ಒಂದೇ ಇರಬೇಕು ಅಂದರೆ ಮಾತ್ರ ರೈತರ ಖಾತೆಗೆ ಹಣ ಜಮಾ ಆಗುತ್ತದೆ
ವಿಶೇಷ ಸೂಚನೆ: ರೈತರ ನಿಮಗೆ ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದರೆ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ನಿಮಗೆ ಬೆಳೆ ಪರಿಹಾರ ಹಣ ಬಿಡುಗಡೆ ಆಗುತ್ತಿಲ್ಲವೆಂದರೆ ಹಾಗೂ ಯಾವುದೇ ರೀತಿ ಸಮಸ್ಯೆ ಕಂಡರೆ ನೀವು ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕೀಗ ಅಥವಾ ಕುಲಕರಣಿ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳು ಮತ್ತು ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಆಸಕ್ತಿ ಇದೆಯಾ ಹಾಗಾದರೆ ನೀವು
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು