Gold Rate Rise – ಚಿನ್ನದ ಬೆಲೆಯಲ್ಲಿ ಭರ್ಜರಿ ಜಿಗಿತ: ಒಂದೇ ದಿನದಲ್ಲಿ ಸಾವಿರದಷ್ಟು ಏರಿಕೆ!
ಬೆಂಗಳೂರು: ಚಿನ್ನದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಆಂದೋಲನದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ದರ ಇಂದು ಸೋಮವಾರ ಭಾರೀ ಜಿಗಿತ ಕಂಡಿದ್ದು, ಒಂದೇ ದಿನದಲ್ಲಿ 1200 ರೂಪಾಯಿಗಳಷ್ಟು ಹೆಚ್ಚಳವಾಗಿ ಹೂಡಿಕೆದಾರರನ್ನು ಆಶ್ಚರ್ಯಕ್ಕೀಡುಮಾಡಿದೆ. ಬೆಳ್ಳಿ ಬೆಲೆಯೂ ಸಹ ಈ ಏರಿಕೆಯ ಜೊತೆಗಾರನಾಗಿ ಗಮನ ಸೆಳೆದಿದೆ.

ಇಂದಿನ ಚಿನ್ನದ ದರ ವಿವರ..?
ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಒಂದು ಗ್ರಾಂಗೆ 12322 ರೂಪಾಯಿ ತಲುಪಿದ್ದು, 10 ಗ್ರಾಂಗೆ ಸುಮಾರು 123220 ರೂಪಾಯಿ ಆಗಿದೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ 120 ರೂಪಾಯಿ ಪ್ರತಿ ಗ್ರಾಂ ಏರಿಕೆಯಾಗಿದೆ. ಅಂದಹಾಗೆ 22 ಕ್ಯಾರೆಟ್ ಚಿನ್ನದ ದರವೂ ಸಹ ಗಣನೀಯವಾಗಿ ಹೆಚ್ಚಾಗಿದ್ದು, ಒಂದು ಗ್ರಾಂಗೆ 11295 ರೂಪಾಯಿ ಮತ್ತು 10 ಗ್ರಾಂಗೆ 112950 ರೂಪಾಯಿ ತಲುಪಿದೆ. ಈ ಏರಿಕೆಯು ದೇಶದಾದ್ಯಂತದ ಮಾರುಕಟ್ಟೆಗಳಲ್ಲಿ ಒಂದೇ ರೀತಿ ಕಂಡುಬಂದಿದೆ.
ಬೆಂಗಳೂರಿನಲ್ಲಿ ಈ ಬೆಲೆಗಳು ಸ್ಥಳೀಯ ತೆರಿಗೆಗಳು ಮತ್ತು ಜಿಎಸ್‌ಟಿ ಸೇರದೆ ಇರುವುದರಿಂದ, ಆಭರಣ ಮಳಿಗೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಹೂಡಿಕೆದಾರರು ಡಿಜಿಟಲ್ ಗೋಲ್ಡ್ ಅಥವಾ ಸಾವರನ್ ಖರೀದಿಸುವಾಗ ಈ ದರಗಳನ್ನು ಆಧಾರವಾಗಿಟ್ಟುಕೊಳ್ಳಬಹುದು.
ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ..?
ಚಿನ್ನದ ಜೊತೆಗೆ ಬೆಳ್ಳಿಯೂ ಸಹ ದುಬಾರಿಯಾಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆ 155 ರೂಪಾಯಿಗೆ ತಲುಪಿದ್ದು, ಒಂದು ಕೆಜಿಗೆ 155000 ರೂಪಾಯಿ ಆಗಿದೆ. ಕಳೆದ ದಿನಕ್ಕೆ ಹೋಲಿಸಿದರೆ ಗ್ರಾಂಗೆ 2 ರೂಪಾಯಿಗಳಷ್ಟು ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಫ್ಯೂಚರ್ಸ್ 2 ಶೇಕಡಕ್ಕಿಂತ ಹೆಚ್ಚು ಏರಿಕೆ ಕಂಡು 150579 ರೂಪಾಯಿ ಪ್ರತಿ ಕೆಜಿಗೆ ವಹಿವಾಟಾಗುತ್ತಿದೆ.
ಏರಿಕೆಗೆ ಮುಖ್ಯ ಕಾರಣಗಳು..?
ಈ ಭಾರೀ ಏರಿಕೆಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಮುಖ್ಯ ಕಾರಣ. ಅಮೆರಿಕದಲ್ಲಿ ನಡೆಯುತ್ತಿರುವ ಸರ್ಕಾರಿ ಶಟ್‌ಡೌನ್ ಈಗಾಗ್ಲೇ 40 ದಿನಗಳನ್ನು ದಾಟಿದ್ದು, ಇದು ದೇಶದ ಇತಿಹಾಸದಲ್ಲೇ ಅತಿ ದೀರ್ಘಕಾಲಿಕ ಶಟ್‌ಡೌನ್ ಆಗಿ ಪರಿಣಮಿಸಿದೆ. ಈ ಅನಿಶ್ಚಿತತೆಯಿಂದ ಡಾಲರ್ ಸೂಚ್ಯಂಕ ದುರ್ಬಲಗೊಂಡಿದ್ದು, ಹೂಡಿಕೆದಾರರು ಸುರಕ್ಷಿತ ಆಸ್ತಿಯಾಗಿ ಚಿನ್ನಕ್ಕೆ ತಿರುಗುತ್ತಿದ್ದಾರೆ.
ಇದಲ್ಲದೆ ಅಮೆರಿಕದ ಫೆಡರಲ್ ರಿಸರ್ವ್ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಬಡ್ಡಿದರ ಕಡಿತ ಮಾಡುವ ನಿರೀಕ್ಷೆಯೂ ಚಿನ್ನದ ಬೆಲೆಗೆ ಬೆಂಬಲ ನೀಡುತ್ತಿದೆ.
ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕುಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿರುವುದು ಮತ್ತು ಆರ್ಥಿಕ ಅಸ್ಥಿರತೆಯಿಂದ ಉಂಟಾಗುತ್ತಿರುವ ಭಯವೂ ಈ ಏರಿಕೆಗೆ ಕಾರಣವಾಗಿದೆ. ತಜ್ಞರ ಪ್ರಕಾರ, ಡಾಲರ್ ದುರ್ಬಲಗೊಳ್ಳುವ ಪ್ರತಿಯೊಂದು ಹಂತದಲ್ಲೂ ಚಿನ್ನದ ಬೆಲೆ ಜಿಗಿಯುತ್ತದೆ.
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ವಿವರ ಹಾಗೂ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸರ್ಕಾರಿ ಯೋಜನೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಹಾಗೂ ಪ್ರತಿದಿನ ಹೊಸ ಹೊಸ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕೆ
ಇದರ ಜೊತೆಗೆ ಸರ್ಕಾರಿ ಹುದ್ದೆಗಳ ನೇಮಕಾತಿ ಬಗ್ಗೆ ಪ್ರತಿದಿನ ಹೊಸ ಸುದ್ದಿಗಳು ಹಾಗೂ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸರಕಾರಿ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಸರ್ಕಾರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಹಾಗೂ ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬಹುದು ಎಂಬ ಮಾಹಿತಿ ಪ್ರತಿದಿನ ಪಡೆದುಕೊಳ್ಳಲು ಆಸಕ್ತಿ ಇದೆಯೇ
ಹಾಗಾದರೆ ನೀವು ಒಂದು ಕೆಲಸ ಮಾಡಬೇಕು ಅದು ಏನು ಅಂದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳುವುದರ ಮೂಲಕ ಪ್ರತಿದಿನ ಹೊಸ ವಿಷಯಗಳು ಹಾಗೂ ಇತರೆ ಯೋಜನೆಗಳ ಬಗ್ಗೆ ಮಾಹಿತಿ ಸಿಗುತ್ತದೆ
ISRO Recruitment 2025 – 10ನೇ ತರಗತಿ ಪಾಸಾದರೆ ಸಾಕು ಇಸ್ರೋದಲ್ಲಿ ಕೆಲಸ ಸಿಗುತ್ತೆ.! ತಿಂಗಳಿಗೆ 92,000 ವರೆಗೆ ಸಂಬಳ, ಈ ರೀತಿ ಅಪ್ಲೈ ಮಾಡಿ