Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸೊಸೈಟಿ ಬ್ಯಾಂಕಿನಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ.!

Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸೊಸೈಟಿ ಬ್ಯಾಂಕಿನಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ.!

ನಮಸ್ಕಾರ ಗೆಳೆಯರೇ ನಮ್ಮ ರಾಜ್ಯದ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ ಎಂದು ಹೇಳಬಹುದು. ಹೌದು ಗೆಳೆಯರೇ ಹೊಸ ಗೃಹಲಕ್ಷ್ಮಿ ಸೊಸೈಟಿ ಬ್ಯಾಂಕ್ ಸ್ಥಾಪನೆ ಮಾಡಿ ಅದರಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಕನಿಷ್ಠ 50 ಸಾವಿರದಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ (Gruhalakshmi Loan Scheme).?

ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳು ಪ್ರತಿ ತಿಂಗಳು 2000 ಹಣ ಈ ಒಂದು ಯೋಜನೆಯ ಮೂಲಕ ಪಡೆಯುತ್ತಿದ್ದಾರೆ, ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಸುಮಾರು 22 ಕಂತಿನ ಹಣ ಅಂದರೆ 44000 ಈ ಒಂದು ಯೋಜನೆ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.

Gruhalakshmi Loan Scheme
Gruhalakshmi Loan Scheme
WhatsApp Group Join Now
Telegram Group Join Now       

 

ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವ ಈಗ ದೊಡ್ಡ ಘೋಷಣೆ ಮಾಡಿದ್ದಾರೆ ಅದು ಏನಪ್ಪಾ ಅಂದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಕನಿಷ್ಠ 50 ಸಾವಿರದಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲು ಗೃಹಲಕ್ಷ್ಮಿ ಬ್ಯಾಂಕ್ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಹಾಗಾಗಿ ಇನ್ನಷ್ಟು ಮಾಹಿತಿ ತಿಳಿಯೋಣ

 

ಗೃಹಲಕ್ಷ್ಮಿ ಸೊಸೈಟಿ ಬ್ಯಾಂಕ್ ಸ್ಥಾಪನೆ (Gruhalakshmi Loan Scheme).?

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾಹಿತಿ ಕೊಂಡಿದ್ದು 19 ನವೆಂಬರ್ 2025 ರಂದು ಗೃಹಲಕ್ಷ್ಮಿ ಬ್ಯಾಂಕ್ ಅಥವಾ ಗೃಹಲಕ್ಷ್ಮಿ ಸೊಸೈಟಿ ಬ್ಯಾಂಕ್ ಸ್ಥಾಪನೆ ಸ್ಥಾಪನೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.

ಮುಂದುವರೆದು ಮಾಧ್ಯಮಗಳೊಂದಿಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸುಮಾರು 1.2 ಕೋಟಿ ಮಹಿಳೆಯರು ಇದ್ದಾರೆ ಈ ಮಹಿಳೆಯರಿಂದ ಕೇವಲ ರೂ.100 ಸಂಗ್ರಹಿಸಿ ಈ ಸೊಸೈಟಿ ಬ್ಯಾಂಕಿನಲ್ಲಿ ಜಮಾ ಮಾಡಲಾಗುತ್ತದೆ

ನಂತರ ಅವಶ್ಯಕತೆ ಇದ್ದವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಗೃಹಲಕ್ಷ್ಮಿ ಬ್ಯಾಂಕ್ ಮೂಲಕ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಇದರಿಂದ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಇತರೆ ವ್ಯಾಪಾರ ಮಾಡಲು ಈ ಒಂದು ಹಣವನ್ನು ಉಪಯೋಗ ಮಾಡಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ಗೃಹಲಕ್ಷ್ಮಿ ಬ್ಯಾಂಕ್ ಸೊಸೈಟಿ ಬ್ಯಾಂಕ್ ತರ ಅಂದರೆ ಸಹಕಾರಿ ಸಂಘಗಳ ತರ ಬ್ಯಾಂಕ್ ರಚನೆ ಮಾಡಲಾಗುತ್ತದೆ ಇದರಲ್ಲಿ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ನೋಂದಣಿ ಮಾಡಿಕೊಳ್ಳಬೇಕು. ಅಥವಾ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1.2 ಕೋಟಿಗಿಂತ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಇವರಲ್ಲಿ ಪ್ರತಿಯೊಬ್ಬರು ಕೇವಲ ರೂ.100 ಹಣ ಸಂಗ್ರಹಿಸಿ ಗೃಹಲಕ್ಷ್ಮಿ ಸಹಕಾರಿ ಸಂಘ ಅಥವಾ ಬ್ಯಾಂಕಿಗೆ ಹಣ ಹೂಡಿಕೆ ಮಾಡಬಹುದು.

ಗೃಹಲಕ್ಷ್ಮಿ ಬ್ಯಾಂಕ್ ಯಾವುದೇ ರೀತಿ ದೇಣಿಗೆ ತೆಗೆದುಕೊಳ್ಳುವುದಿಲ್ಲ ಅದು ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಮಾಲೀಕರಾಗಿರುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿ ತಿಳಿಸಿದ್ದಾರೆ. ಮತ್ತು ಈ ಒಂದು ಬ್ಯಾಂಕಿಗೆ ಫೋನ್ ಪೇ ಹಾಗೂ ಯುಪಿಐ ಮೂಲಕ 100 ಹಣ ಪಾವತಿ ಮಾಡಿ ಈ ಒಂದು ಬ್ಯಾಂಕಿನಲ್ಲಿ ಸದಸ್ಯರಾಗಬಹುದು

 

ಗೃಹಲಕ್ಷ್ಮಿ ಬ್ಯಾಂಕ್ ಹೇಗೆ ಕಾರ್ಯನಿರ್ವಹಿಸುತ್ತದೆ (Gruhalakshmi Loan Scheme).?

ಕೆಲವೊಂದು ಮಾಧ್ಯಮಗಳ ಮಾಹಿತಿ ಪ್ರಕಾರ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿರುವ ಪ್ರಕಾರ ಗೃಹಲಕ್ಷ್ಮಿ ಬ್ಯಾಂಕ್ ಈಗಾಗಲೇ ನೋಂದಾಯಿತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಈ ಒಂದು ಬ್ಯಾಂಕ್ ನಲ್ಲಿ ಸದಸ್ಯರನ್ನಾಗಿ ಮಾರ್ಪಡು ಮಾಡಲಾಗುತ್ತದೆ ಅಥವಾ ಸದಸ್ಯತ್ವ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ಹೌದು ಗೆಳೆಯರೇ ಗೃಹಲಕ್ಷ್ಮಿ ಬ್ಯಾಂಕ್ ಈಗಿರುವ ಸಹಕಾರಿ ಸಂಘಗಳ ತರಾನೇ ಈ ಒಂದು ಬ್ಯಾಂಕ್ ಕೆಲಸ ಮಾಡುತ್ತದೆ. ಈ ಬ್ಯಾಂಕಿನಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳು ಹಣವನ್ನು ಹೂಡಿಕೆ ಮಾಡಬೇಕು ಹಾಗೂ ಹೂಡಿಕೆ ಮಾಡಿದ ಹಣವನ್ನು ಗೃಹಲಕ್ಷ್ಮಿಗಳಿಗೆ ಅಗತ್ಯಕ್ಕೆ ತಕ್ಕಂತೆ 3 ಲಕ್ಷದವರೆಗೆ ವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ 4-5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ

ಇದರಿಂದ ಸಾಲ ಪಡೆದಂತ ಮಹಿಳೆಯರು ಮಕ್ಕಳ ಶಿಕ್ಷಣ ಹಾಗೂ ಹೊಸ ವ್ಯಾಪಾರ ಆರಂಭಿಸಬಹುದು ಹಾಗೂ ಚಿಕಿತ್ಸೆ ಮುಂತಾದ ಕಾರಣಗಳಿಗೆ ಈ ಒಂದು ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡು ತಮ್ಮ ಬದುಕು ಕಟ್ಟಿಕೊಳ್ಳಬಹುದು ಎಂದು ಮಾಹಿತಿ ತಿಳಿಸಲಾಗಿದೆ

ಹಾಗಾಗಿ ಇನ್ನಷ್ಟು ಗೃಹಲಕ್ಷ್ಮಿ ಬ್ಯಾಂಕಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ 19 ನವೆಂಬರ್ 2025 ರಂದು ಪ್ರಕಟವಾಗಲಿದೆ ಹಾಗೂ ಈ ಬ್ಯಾಂಕನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉದ್ಘಾಟನೆ ಮಾಡಲಿದ್ದಾರೆ

 

ಮಹಿಳೆಯರಿಗಾಗಿ ಹೊಸ ಯೋಜನೆಗಳನ್ನು ನವೆಂಬರ್ 19ನೇ ತಾರೀಕಿಗೆ ಉದ್ಘಾಟನೆ ಮಾಡಲಿದ್ದಾರೆ.?

ಹೌದು ಸ್ನೇಹಿತರೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವದಲ್ಲಿ ಸುಮಾರು ಮೂರು ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಿದ್ದಾರೆ ಅವುಗಳ ವಿವರ ಈ ಕೆಳಗಿನಂತಿದೆ

1) ಅಂಗನವಾಡಿ ಸುವರ್ಣ ಮಹೋತ್ಸವ

2) ಅಕ್ಕ ಪಡೆ ಲೋಕಾರ್ಪಣೆ

3) ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ

 

ಮೇಲೆ ತಿಳಿಸಿದ ಮೂರು ಯೋಜನೆಗಳನ್ನು ಹೊಸದಾಗಿ 19 ನವೆಂಬರ್ 2025 ರಂದು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಈ ಒಂದು ಉದ್ಘಾಟನೆ ಇಂದಿರಾಗಾಂಧಿ ಜನ್ಮದಿನದ ಅಂಗವಾಗಿ ಐತಿಹಾಸಿಕ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದ್ದು ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚಿನ ಮಹಿಳೆಯರು ಆಗಮಿಸಬಹುದು ಎಂದು ಅಂದಾಜಿಸಲಾಗಿದೆ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಿ

New Ration Card – ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ

 

Leave a Comment

?>