Gruhalakshmi Scheme – ಗೃಹಲಕ್ಷ್ಮಿ ಯೋಜನೆಯ 2000 ಹಣ ಬಿಡುಗಡೆ.! ಬಾಕಿ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
ನಮಸ್ಕಾರ ಗೆಳೆಯರೇ ನಮ್ಮ ಕರ್ನಾಟಕದಲ್ಲಿ ಅತಿ ಜನಪ್ರಿಯ ಯೋಜನೆ ಯಾವುದು ಎಂದು ಕೇಳಿದರೆ ತಕ್ಷಣ ಜನರಿಗೆ ನೆನಪಾಗುವ ಯೋಜನೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಬಂದಿದೆ, ಹೌದು ಗೆಳೆಯರೇ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಹಣ ಪಡೆಯಲು ಮಹಿಳೆಯರು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಇದಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆ ಎಂದರೇನು (Gruhalakshmi Scheme).?
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಪರಿಚಯಿಸಿದ ಪಕ್ಷ ಯಾವುದು ಎಂದರೆ ಅದು ಕಾಂಗ್ರೆಸ್ ಪಕ್ಷ, ಈ ಪಕ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ 5 ಗ್ಯಾರೆಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ಅಬೂತಪೂರ್ವ ಗೆಲುವು ದಾಖಲಿಸುವ ಮೂಲಕ ನಮ್ಮ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ.

ಹೌದು ಗೆಳೆಯರೆ ಕಾಂಗ್ರೆಸ್ ಪಕ್ಷ ಜನರಿಗೆ ಐದು ಗ್ಯಾರಂಟಿಗಳು ನೀಡುವುದಾಗಿ ಭರವಸೆ ನೀಡಿತ್ತು ಆ ಗ್ಯಾರಂಟಿಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದು ಪ್ರಮುಖ ಗ್ಯಾರಂಟಿಯಾಗಿದೆ. ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ವರ್ಗಾವಣೆ ಮಾಡುವಂತ ಯೋಜನೆಯೇ ಗೃಹಲಕ್ಷ್ಮಿ ಯೋಜನೆಯಾಗಿದೆ.
ಹೌದು ಗೆಳೆಯರೇ ಇಲ್ಲಿವರೆಗೂ ಮಹಿಳೆಯರು ಸುಮಾರು 22ನೇ ಕಂತಿನ ಹಣದವರೆಗೆ ಅಂದರೆ ಬರೋಬ್ಬರಿ ಈ ಒಂದು ಯೋಜನೆಯ ಮೂಲಕ 44,000 ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗಾಗಿ ಇನ್ನು ಮಹಿಳೆಯರಿಗೆ ಹಲವಾರು ಹಣ ಬಾಕಿ ಇದೆ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯೋಣ.
ಗೃಹಲಕ್ಷ್ಮಿ ಯೋಜನೆಯ 2000 ಹಣ ಬಿಡುಗಡೆ (Gruhalakshmi Scheme).?
ಹೌದು ಸ್ನೇಹಿತರೆ ಅಕ್ಟೋಬರ್ 20 ನೇ ತಾರೀಖಿನಂದು ಗೃಹಲಕ್ಷ್ಮಿ ಯೋಜನೆಯ 22ನೇ ಕಂತಿನ ರೂ.2000 ಹಣ ಬಿಡುಗಡೆ ಮಾಡಲಾಯಿತು. ಇದೀಗ ಮಹಿಳೆಯರ ಖಾತೆಗೆ ಈ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗಿದೆ ಹಾಗೂ ಇನ್ನೂ ಮಹಿಳೆಯರಿಗೆ ಹಲವಾರು ಕಂತಿನ ಹಣ ಬಾಕಿ ಇದೆ ಹಾಗಾಗಿ ಈ ಬಾಕಿ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಮಹಿಳೆಯರು ಕಾತುರದಿಂದ ಎದುರು ನೋಡುತ್ತಿದ್ದಾರೆ..
ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಬಾಕಿ ಕಂತಿನ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಭರವಸೆ ನೀಡಿದ್ದಾರೆ ಹಾಗಾಗಿ ಮಹಿಳೆಯರು ಹಣ ಬರುವವರೆಗೂ ತಾಳ್ಮೆಯಿಂದ ಕಾಯಬೇಕು. ಇದೀಗ ಮಹಿಳೆಯರಿಗೆ ಇನ್ನು ಎಷ್ಟು ಕಂತಿನ ಹಣ ಬಾಕಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆಯ ಇನ್ನು ಎಷ್ಟು ಕಂತಿನ ಹಣ ಬಾಕಿ ಇದೆ (Gruhalakshmi Scheme).?
- 21ನೇ ಕಂತಿನ (ಜೂನ್) ತಿಂಗಳ 2000 ಹಣ ಈಗಾಗಲೇ ಎಲ್ಲಾ ಮಹಿಳೆಯರ ಖಾತೆಗೆ ಬಿಡುಗಡೆಯಾಗಿದೆ
- 22ನೇ ಕಂತಿನ ಹಣ (ಜುಲೈ) ತಿಂಗಳ ರೂ 2000 ಹಣ 20 ಅಕ್ಟೋಬರ್ 2025 ರಂದು ಮಹಿಳೆಯರ ಖಾತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ
- 23ನೇ ಕಂತಿನ ಹಣ (ಆಗಸ್ಟ್) ಶೀಘ್ರದಲ್ಲಿ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ
- 24ನೇ ಕಂತಿನ (ಸೆಪ್ಟೆಂಬರ್) ಶೀಘ್ರದಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವ ದಿನಾಂಕ ಬಿಡುಗಡೆ
- 25ನೇ ಕಂತಿನ (ಅಕ್ಟೋಬರ್) ತಿಂಗಳ ಹಣ ಶೀಘ್ರದಲ್ಲಿ ಬಿಡುಗಡೆಯ ದಿನಾಂಕ ಪ್ರಕಟಣೆ
ಗೃಹಲಕ್ಷ್ಮಿ ಬಾಕಿ ಕಂತಿನ ಹಣ ಪಡೆಯಲು ಮಹಿಳೆಯರು ಈ ಕೆಲಸ ಮಾಡುವುದು ಕಡ್ಡಾಯ (Gruhalakshmi Scheme).?
ಬ್ಯಾಂಕ್ ಖಾತೆ ಸರಿಪಡಿಸಿ: ಮಹಿಳೆಯರು ಬಾಕಿ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ e-kyc ಪೂರ್ಣಗೊಳಿಸಬೇಕು ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇದರ ಜೊತೆಗೆ ಅತಿ ಮುಖ್ಯವಾಗಿ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ
ಗೃಹಲಕ್ಷ್ಮಿ ಅರ್ಜಿ e-kyc: ಹೌದು ಗೆಳೆಯರೇ ನಿಮಗೆ ಹಲವಾರು ಕಂತಿನ ಹಣ ಬಾಕಿ ಇದ್ದರೆ ಕಡ್ಡಾಯವಾಗಿ ನೀವು ಇನ್ನೊಂದು ಸಲ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿ ಅರ್ಜಿಯ E-kyc ಪ್ರಕ್ರಿಯ ಪೂರ್ಣಗೊಳಿಸಿ
ರೇಷನ್ ಕಾರ್ಡ್ ಅಪ್ಡೇಟ್: ಗೃಹಲಕ್ಷ್ಮಿ ಅರ್ಜಿಯ ಫಲಾನುಭವಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಯಾಗಿರಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಎಲ್ಲಾ ಸದಸ್ಯರ e-kyc ಪೂರ್ಣಗೊಳಿಸಬೇಕು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇದನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ
ಒಂದೇ ಹೆಸರು ಹೊಂದಿರಬೇಕು: ಹೌದಾ ಸ್ನೇಹಿತರೆ ಗೃಹಲಕ್ಷ್ಮಿ ಅರ್ಜಿ ಹಾಗೂ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಫಲಾನುಭವಿಯ ಹೆಸರು ಒಂದೇ ಆಗಿರಬೇಕು ಅಂದರೆ ಮಾತ್ರ ನಿಮಗೆ ಬಾಕಿ ಇರುವ ಎಲ್ಲಾ ಕಂತಿನ ಹಣ ಜಮಾ ಆಗುತ್ತದೆ
ವಿಶೇಷ ಸೂಚನೆ: ನಿಮಗೆ 08 ಅಥವಾ 10 ಕಂತಿನ ಹಣ ಬಾಕಿ ಇದ್ದರೆ, ಕೂಡಲೇ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (DWCD) ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಹಾಗೂ ಎಷ್ಟು ಕಂತಿನ ಹಣ ಬಾಕಿ ಇದೆ ಎಂಬ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬಹುದು ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
E Shram Card – ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಸಾಕು ಪ್ರತಿ ತಿಂಗಳು 3000 ಹಣ ಸಿಗುತ್ತೆ