ISRO Recruitment 2025 – 10ನೇ ತರಗತಿ ಪಾಸಾದರೆ ಸಾಕು ಇಸ್ರೋದಲ್ಲಿ ಕೆಲಸ ಸಿಗುತ್ತೆ.! ತಿಂಗಳಿಗೆ 92,000 ವರೆಗೆ ಸಂಬಳ, ಈ ರೀತಿ ಅಪ್ಲೈ ಮಾಡಿ
ನಮಸ್ಕಾರ ಗೆಳೆಯರೇ ನೀವು 10ನೇ ತರಗತಿ ಪಾಸ್ ಆಗಿದ್ದೀರಾ ಮತ್ತು ಸರಕಾರಿ ಕೆಲಸ ಸೇರಲು ಬಯಸುತಿದ್ದೀರಾ ಹಾಗಾದ್ರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಸುಮಾರು 55 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದೆ ಹಾಗಾಗಿ ಆಸಕ್ತಿ ಇರುವವರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಮತ್ತು ಅರ್ಜಿ ಸಲ್ಲಿಸಲು 13 ನವೆಂಬರ್ 2025 ಕೊನೆಯ ದಿನಾಂಕವಾಗಿದೆ.
ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು ಹಾಗೂ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿಸಿ ಕೊಡುತ್ತೇವೆ ಹಾಗಾಗಿ ನೀವು ಈ ಲೇಖನೆಯನ್ನು ಆದಷ್ಟು ನಿರುದ್ಯೋಗಿಗಳಿಗೆ ಶೇರ್ ಮಾಡಿ
ಇಸ್ರೋ ಹೊಸ ನೇಮಕಾತಿ (ISRO Recruitment 2025 notification)..?
ಹೌದು ಸ್ನೇಹಿತರೆ ನಮ್ಮ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೀಗ ವೈಜ್ಞಾನಿಕ ಕ್ಷೇತ್ರದಲ್ಲಿ ಅತ್ಯುನ್ನತವಾದ ಸಾಧನೆ ಮಾಡುತ್ತಿದೆ, ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ 55 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಿದೆ. ಈ ಹುದ್ದೆಗಳ ಪೈಕಿ ಟೆಕ್ನಿಷಿಯನ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ

ಹಾಗಾಗಿ ನೀವು ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ 13 ನವೆಂಬರ್ 2025 ರ ಒಳಗಡೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು ಮತ್ತು ಸಂಬಳ ಎಷ್ಟು ಹಾಗೂ ಇತರೆ ವಿವರಗಳನ್ನು ಇದೀಗ ತಿಳಿದುಕೊಳ್ಳೋಣ
ಇಸ್ರೋ ನೇಮಕಾತಿ 2025 ವಿವರ (ISRO Recruitment 2025).?
ನೇಮಕಾತಿ ಸಂಸ್ಥೆ: ಇಸ್ರೋ (ISRO)
ಖಾಲಿ ಹುದ್ದೆಗಳ ಸಂಖ್ಯೆ: 55 ಹುದ್ದೆಗಳು
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
ಅರ್ಜಿ ಪ್ರಾರಂಭ ದಿನಾಂಕ: 01 ನವೆಂಬರ್ 2025
ಅರ್ಜಿ ಕೊನೆಯ ದಿನಾಂಕ: 13 ನವೆಂಬರ್ 2025
ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ಪ್ರಕಟಣೆ
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಖಾಲಿ ಹುದ್ದೆಗಳ ವಿವರ:
1) ಟೆಕ್ನಿಷಿಯನ್ ಬಿ (ವಿವಿಧ ವಿಭಾಗದ ಹುದ್ದೆಗಳು)
2) ಫಾರ್ಮಸಿಸ್ಟ್ ಹುದ್ದೆಗಳು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು.?
ಶೈಕ್ಷಣಿಕ ಅರ್ಹತೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಟೆಕ್ನಿಷಿಯನ್ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು ಜೊತೆಗೆ ಸಂಬಂಧಿತ ವಿಭಾಗದಲ್ಲಿ ITI ಪ್ರಮಾಣ ಪತ್ರ ಹೊಂದಿರಬೇಕು ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಇತ್ಯಾದಿ ವಿಭಾಗದಲ್ಲಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು,
ಫಾರ್ಮಸಿಸ್ಟ್ ಹುದ್ದೆಗಳಿಗೆ ಫಾರ್ಮಸಿ ಡಿಪ್ಲೋಮೋ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ವಯೋಮಿತಿ ಎಷ್ಟು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 35 ವರ್ಷದ ಒಳಗಡೆ ಇರಬೇಕು ಇದರ ಜೊತೆಗೆ ಸರಕಾರದ ಮೀಸಲಾತಿ ನಿಯಮಗಳ ಅನುಸಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಮತ್ತು ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಅರ್ಜಿ ಶುಲ್ಕ ಎಷ್ಟು: ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಪಿ ಡಬ್ಲ್ಯೂ ಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ
ಸಂಬಳ ಎಷ್ಟು: ಇಸ್ರೋ ಸಂಸ್ಥೆ ಬಿಡುಗಡೆ ಮಾಡಿರುವ ನೇಮಕಾತಿ ಅಧಿಸೂಚನೆ ಪ್ರಕಾರ ಟೆಕ್ನಿಷಿಯನ್ ಹಾಗೂ ಫಾರ್ಮಸಿಸ್ಟ್ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 29,200 ಯಿಂದ 92300 ವರೆಗೆ ಹುದ್ದೆಗಳ ಅನುಗುಣವಾಗಿ ಸಂಬಳ ನೀಡಲಾಗುತ್ತದೆ ಇದರ ಜೊತೆಗೆ ಕೇಂದ್ರ ಸರಕಾರದ 7ನೇ ವೇತನ ಆಯೋಗದ ಅಡಿಯಲ್ಲಿ ಪಿಂಚಣಿ ಹಾಗೂ ಇತರೆ ಸರಕಾರಿ ಭತ್ಯೆಗಳ ಸೌಲಭ್ಯ ಸಿಗುತ್ತದೆ
ಆಯ್ಕೆಯ ವಿಧಾನ (ISRO Recruitment 2025 selection process).?
ಭಾರತೀಯ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಈ 55 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇಮಕಾತಿ ಅಧಿಸೂಚನೆ ಪ್ರಕಾರ ಮೊದಲು ಲಿಖಿತ ಪರೀಕ್ಷೆಯ ಮೂಲಕ ತಾಂತ್ರಿಕ ಜ್ಞಾನ ಹಾಗೂ ಸಾಮಾನ್ಯ ಜ್ಞಾನ ಮತ್ತು ತರ್ಕಶಕ್ತಿ ಮುಂತಾದ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಪ್ರಕ್ರಿಯೆ ನಡೆಸಿ ಆಯ್ಕೆ ಮಾಡಲಾಗುತ್ತದೆ ನಂತರ ಕೌಶಲ್ಯ ಪರೀಕ್ಷೆ ಹಾಗೂ ಅಭ್ಯರ್ಥಿಯ ಪ್ರಾಯೋಗಿಕ ಕೌಶಲ್ಯ ಪರೀಕ್ಷೆ ಮುಂತಾದ ವಿಧಾನಗಳನ್ನು ಅನುಸರಿಸಲಾಗುತ್ತದೆ, ನಂತರ ಅಭ್ಯರ್ಥಿಗಳಿಗೆ ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿಕೊಳ್ಳಿ
ಅರ್ಜಿ ಸಲ್ಲಿಸುವುದು ಹೇಗೆ (How To Apply online for ISRO Recruitment 2025).?
- ಮೊದಲು sac.gov.in ಜಾಲತಾಣಕ್ಕೆ ಅಭ್ಯರ್ಥಿಗಳು ಭೇಟಿ ನೀಡಬೇಕು
- ನಂತರ ಕೆರಿಯರ್ ವಿಭಾಗದಲ್ಲಿ ಇಸ್ರೋ SAC ರಿಕ್ರೂಟ್ಮೆಂಟ್ 2025 ಮೇಲೆ ಕ್ಲಿಕ್ ಮಾಡಿ
- ನಂತರ ಈ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ
- ನಂತರ ಅಪ್ಲೈ ಎಂಬ ವಿಭಾಗದ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ನೋಂದಣಿ ಮಾಡಿಕೊಳ್ಳಿ ಹಾಗೂ ಮೊಬೈಲ್ ನಂಬರ್ ಹಾಗೂ ಇತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ನಂತರ ಅರ್ಜಿ ಶುಲ್ಕ ಪಾವತಿಸಿ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿದ ಪ್ರಿಂಟೌಟ್ ತೆಗೆದುಕೊಳ್ಳಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಪ್ರತಿದಿನ ಪಡೆಯಲು ನಮ್ಮ ವಾಟ್ಸಾಪ್ ಚಾನಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು