ಪಿಎಂ ಆವಾಸ್ ಯೋಜನೆ 2.0 ನಗರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 25 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ, ಸಬ್ಸಿಡಿ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಮಾಡಬೇಕು ಎಂಬ ಒಂದು ಕನಸು ಇದ್ದೇ ಇರುತ್ತೆ ಅಂತವರಿಗೆ ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಬರೋಬ್ಬರಿ 25 ಲಕ್ಷ ವರೆಗೆ ಸಾಲ ಸೌಲಭ್ಯ ಮನೆ ಕಟ್ಟಿಸಲು ನೀಡಲಾಗುತ್ತದೆ ಹಾಗೂ 2.67 ಲಕ್ಷ ವರೆಗೆ ಸಬ್ಸಿಡಿ ಒಂದು ಯೋಜನೆಯ ಮೂಲಕ ಪಡೆಯಬಹುದಾಗಿದೆ ಹಾಗಾಗಿ ನಾವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬ ವಿವರ
ಪಿಎಂ ಆವಾಸ್ ಯೋಜನೆ 2.0 ಗೆ ಅರ್ಜಿ ಪ್ರಾರಂಭ..?
ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುತ್ತ ಬಾಲ್ಕನಿಯಿಂದ ನಗರದ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಒಮ್ಮೆಯಾದರೂ ಕೂಡ ಇದೇ ರೀತಿ ನಾನು ಸ್ವಂತ ಮನೆ ಕಟ್ಟಿಸಬೇಕೆಂದು ಕನಸು ಕಾಣುತ್ತಿದ್ದವರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್.

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ ನಗರ ಪ್ರದೇಶದಲ್ಲಿ ವಾಸ ಮಾಡುವಂತಹ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಬರೋಬ್ಬರಿ 25 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುತ್ತಿದೆ ಮತ್ತು 2.67 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಕೂಡ ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತಿದೆ
ಸಾಮಾನ್ಯರಿಗೆ ಹಾಗೂ ನಗರ ಪ್ರದೇಶದಲ್ಲಿ ವಾಸ ಮಾಡುವಂಥ ಬಾಡಿಗೆದಾರರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಇದೀಗ ಕೇಂದ್ರ ಸರ್ಕಾರ ಪಕ್ಕಾ ಮನೆ ನಿರ್ಮಾಣ ಮಾಡಲು ಪ್ರಥಮ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದೆ.
ಈ ಒಂದು ಯೋಜನೆ ಇದೀಗ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದು ಸ್ವಂತ ಮನೆ ನಿರ್ಮಾಣ ಮಾಡಲು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ ಹಾಗೂ ಮನೆ ಕಟ್ಟಿಸಲು 2.67 ಲಕ್ಷ ವರೆಗೆ ಸಬ್ಸಿಡಿ ನೀಡುತ್ತಿದೆ
ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಪಟ್ಟಿಯನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಲಾಗಿತ್ತು. ಆದರೆ ಪ್ರಸ್ತುತ ನಗರ ಪ್ರದೇಶದಲ್ಲಿ ವಾಸ ಮಾಡುವಂಥ ಜನರಿಗೆ ಇದೀಗ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ನೀವು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
ಪಿಎಂ ಆವಾಸ್ ಯೋಜನೆ 2024 ಸೆಪ್ಟೆಂಬರ್ 1ನೇ ತಾರೀಖಿನಿಂದ ಜಾರಿಯಲ್ಲಿ ಇದೆ ಹಾಗೂ ಮುಂದಿನ ಐದು ಒಳಗಡೆ ಈ ಒಂದು ಯೋಜನೆಯ ಮೂಲಕ ಸುಮಾರು ನಗರ ಪ್ರದೇಶದಲ್ಲಿ ಒಂದು ಕೋಟಿ ಮನೆ ನಿರ್ಮಾಣ ಮಾಡುವುದು ಗುರಿ ಹೊಂದಲಾಗಿದೆ ಹಾಗಾಗಿ ಸ್ವಂತ ಮನೆ ಕಟ್ಟಿಸಲು ಬಯಸುವವರು ತಕ್ಷಣ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಸಿಎಂ ಆವಾಸ್ ಯೋಜನೆ 2.0 ಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು..?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು 21 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಕೆ ಮಾಡಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಗಂಡ ಮತ್ತು ಹೆಂಡತಿ ಹಾಗೂ ಅವಿವಾಹಿತ ಮಕ್ಕಳಿಗೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ
- ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ (EWS) ಅವರ ವಾರ್ಷಿಕ ಆದಾಯ 3 ಲಕ್ಷದ ಒಳಗಡೆ ಇರಬೇಕು ಹಾಗೂ ಕಡಿಮೆ ಆದಾಯ (LIG) ವರ್ಗದವರ ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷದ ಒಳಗಡೆ ಇರಬೇಕು ಮತ್ತು ಮಧ್ಯಮ ವರ್ಗದ ಆದಾಯ ಹೊಂದಿರುವ (MIG) ಕುಟುಂಬದ ವಾರ್ಷಿಕ ಆದಾಯ 6 ಲಕ್ಷದಿಂದ 9 ಲಕ್ಷದ ಒಳಗಿದ್ದವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಯಾವುದೇ ರೀತಿ ಸ್ವಂತ ಮನೆ ಅಥವಾ ಪಕ್ಕಾ ಮನೆ ಹೊಂದಿರಬಾರದು
- ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರು ಕನಿಷ್ಠ 30 ಚದರ್. ಮೀಟರ್ ಕಾರ್ಪೊರೇಟ್ ಏರಿಯಾ ಹೊಂದಿರಬೇಕು ಹಾಗೂ ರಾಜ್ಯಗಳಲ್ಲಿ 45 ಚದರ. ಮೀಟರ್ವರೆಗೆ ವಿಸ್ತೀರ್ಣದ ಜಾಗ ಹೊಂದಿರಬೇಕು
ಪಿಎಂ ಆವಾಸ್ ಯೋಜನೆ 2.0 ಅರ್ಜಿ ಯಾರ ಹೆಸರಿನಲ್ಲಿ ಇರಬೇಕು..?
ಸಾಮಾನ್ಯವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಇದರಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ, ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮಹಿಳೆಯರು ಮುಖ್ಯಸ್ಥರ ಹೆಸರಿನಲ್ಲಿ ಇರಬಹುದು ಅಥವಾ ಜಂಟಿ ಹೆಸರಿನಲ್ಲಿ ಈ ಒಂದು ಅರ್ಜಿ ಹಾಕಬಹುದು ಮತ್ತು ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ಪುರುಷ ಅಥವಾ ಮಹಿಳೆಯರ ಹೆಸರಿನಲ್ಲಿ ಯಾವುದೇ ರೀತಿ ಸ್ವಂತ ಮನೆ ಹೊಂದಿರಬಾರದು
ಈ ಒಂದು ಯೋಜನೆ ಅಡಿಯಲ್ಲಿ ಅತಿ ಹೆಚ್ಚು ಒತ್ತು ನೀಡುವುದೆಂದರೆ ಅದು ವಿಧಿವೆಯರಿಗೆ ಹಾಗೂ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಹಾಗೂ ಒಂಟಿ ಮಹಿಳೆಯರಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತದೆ ಹಾಗಾಗಿ ಆಸಕ್ತಿ ಇರುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಮನೆ ಕಟ್ಟಿಸಲು ಎಷ್ಟು ಆರ್ಥಿಕ ನೆರವು ನೀಡಲಾಗುತ್ತದೆ..?
ಸ್ನೇಹಿತರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಮನೆ ಕಟ್ಟಿಸಲು 2.67 ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತದೆ ಹಾಗೂ ಸರಕಾರಿ ಅಥವಾ ಪ್ರೈವೇಟ್ ಬ್ಯಾಂಕ್ ಗಳ ಮೂಲಕ ಗರಿಷ್ಠ 25 ಲಕ್ಷ ರೂಪಾಯಿವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ 5% ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಪಿಎಂ ಆವಾಸ್ ಯೋಜನೆ 2.0 ಗೆ ಅರ್ಜಿ ಸಲ್ಲಿಸುವುದು ಹೇಗೆ..?
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಧಿಕೃತ ಜಾಲತಾಣ pmaymis.gov.in OR pmay-urban.gov.in ಜಾಲತಾಣಕ್ಕೆ ಭೇಟಿ ನೀಡಿ
- ನಂತರ ಅಲ್ಲಿ ಅಪ್ಲೈ PMAY-U 2.0 ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಆಯ್ಕೆಯ ವಿಭಾಗ ಬಿ ಎಲ್ ಸಿ ಅಥವಾ ಎ ಎಚ್ ಪಿ ಅಥವಾ ಎಆರ್ ಎಚ್ ಅಥವಾ ಸಿಎಲ್ ಎಸ್ ಎಸ್ ಅನುಸಾರವಾಗಿ ನಿಮಗೆ ಸೂಕ್ತವಾದ ಆಯ್ಕೆ ಪಟ್ಟಿಯನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ
- ನಂತರ ನಿಮ್ಮ ವೈಯಕ್ತಿಕ ವಿವರ ಹಾಗೂ ಬ್ಯಾಂಕ್ ಖಾತೆಯ ದಾಖಲಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಜಮೀನು ದಾಖಲಾತಿ ಮುಂತಾದ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ನಂತರ ನಿಮಗೆ ಅರ್ಜಿ ಸಲ್ಲಿಸಿದ ಒಂದು ಸಂಖ್ಯೆ ಸಿಗುತ್ತದೆ ಅದನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ
ಪಿಎಂ ಆವಾಸ್ ಯೋಜನೆಗೆ 2.0 ಗೆ ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಇತರೆ ಅಗತ್ಯ ದಾಖಲಾತಿಗಳು
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಮನೆ ಇಲ್ಲದಂತ ಕುಟುಂಬದವರಿಗೆ ಹಾಗೂ ಮನೆ ಕಟ್ಟಿಸಲು ಸರ್ಕಾರದಿಂದ ಹಣಕಾಸು ನೆರವು ಪಡೆಯಲು ಬಯಸುವಂತಹ ಕುಟುಂಬದವರಿಗೆ ಶೇರ್ ಮಾಡಿ ಹಾಗೂ
ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
gruh Lakshmi Yojana – ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಸಿಎಂ ಸಿದ್ದರಾಮಯ್ಯ!